ವಿಜಯಪುರ: ಹಾಡುಹಗಲೆ ಆಟೋ ಡ್ರೈವರ್ನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ವಿಜಯಪುರದ ಗೋಳಗುಮ್ಮಟ್ ಎದುರು ನಡೆದಿದೆ.
ನಗರದ ರೈಲ್ವೆ ಸ್ಟೇಷನ್ ನಿವಾಸಿ ಹಾಗೂ 22 ವರ್ಷದ ವೀರೇಶ ಶಿವಾನಂದ ಬಂಥನಾಳ ಹತ್ಯೆಯಾಗಿರುವ ಆಟೋ ಡ್ರೈವರ್. ಇನ್ನು ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹತ್ಯೆಗೈದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.