ವಿಜಯಪುರ: ಆಟೋ ಚಾಲಕನ ಹತ್ಯೆಗೈದಿರುವ ಆರೋಪಿಗಳಿಬ್ಬರನ್ನು 24 ಗಂಟೆಯ ಒಳಗೆ ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.
ನೂರ್ಅಹ್ಮದ್ ಬುಡ್ಡೆಸಾಬ್ ನಾಯಿಕ್, ಸಮೀರ ರಫೀಕ್ ನಾಯಿಕ್ ಬಂಧಿತ ಆರೋಪಿಗಳು. ಇನ್ನು ಆರೋಪಿಗಳು ಹಣಕಾಸಿನ ವಿಚಾರಕ್ಕೆ ತೌಫಿಕ್ ಮೆಹಬೂಬ್ ಚಿನಿವಾರ್ನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಜೇವರ್ಗಿ ಬೈಪಾಸ್ ಬಳಿ ಹತ್ಯೆಗೈದಿದ್ದರು.
ಸಿಂದಗಿ ಪಿಎಸ್ಐ ನಿಂಗಪ್ಪ ಪೂಜಾರಿ ಹಾಗೂ ತಂಡ 24 ಘಂಟೆಗಳ ಒಳಗೆ ಆರೋಪಿಗಳ ಲಾಕ್ಗೈದು ದರ್ಗಾ ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.