*ಬಂಜಾರಾ ಕ್ರಾಸ್ ಇನ್ನು ಮುಂದೆ ಸಂತ ಸೇವಾಲಾಲ ವ್ರತ್ತ*
:ವಿಜಯಪುರ ನಗರದಲ್ಲಿ ಎಲ್ಲ ಮಹಾನ್ ಭಾವರ ಹೆಸರಿನಲ್ಲಿ ವ್ರತ್ತಗಳಿದ್ದು .ಸಂತ ಸೇವಾಲಾಲ ಅವರ ಹೆಸರಿನಲ್ಲಿ ಯಾವುದೇ ಒಂದು ವ್ರತ್ತ ಇರಲಿಲ್ಲ ಅದು ಈಗ ಬಂಜಾರಾ ವ್ರತ್ತಕ್ಕೆ ಸಂತ ಸೇವಾಲಾಲ ಅವರ ಹೆಸರು ಇಡಲಾಗಿದೆ ಎಂದು ಬಾಬು ರಾಜೇಂದ್ರ ನಾಯಕ ತಿಳಿಸಿದರು..
ಇನ್ನು ವಿಜಯಪುರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ಬಂಜಾರಾ ಸಮುದಾಯದವರಿಂದ ಹಲವು ಬಾರಿ ಮನವಿ ಮಾಡಿದರು ಸಂತ ಸೇವಾಲಾಲ ಅವರ ವ್ರತ್ತ ನಿರ್ಮಾಣದ ಕನಸು ಹಲವಾರು ವರ್ಷಗಳಿಂದ ಕಾಡುತ್ತಿತ್ತು ಆದರೆ ಈ ಕನಸು ನನಸಾಗಿದೆ ಇಲ್ಲಿಯ ನಾಯಕರಾದ ಎಂ.ಬಿ.ಪಾಟೀಲರು ಮತ್ತು ನಗರದ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳರ ಸಹಾಯದಿಂದ ಬಂಜಾರಾ ವ್ರತ್ತವನ್ನು ಸಂತ ಸೇವಾಲಾಲ ಎಂದು ನಾಮಕರಣ ಮಾಡಿದ್ದು ಇದಕ್ಕೆ ಸಹಕರಿಸಿದ ಎಲ್ಲ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಧನ್ಯವಾದವನ್ನು ತಿಳಿಸಿದರು..