ಹುಬ್ಬಳ್ಳಿ: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯ ತಲೆಗೆ ಕೊಡಲಿಯಿಂದ ಕೊಚ್ಚಿ ಪತಿ ಮಹಾಶಯ ಬರ್ಬರವಾಗಿ ಹತ್ಯೆಗೈದಿರುವ ಹಳೇಹುಬ್ಬಳ್ಳಿಯ ಆನಂದನಗರದ ಬ್ಯಾಹಟ್ಟಿ ಪ್ಲಾಟ್ ನಲ್ಲಿ ನಡೆದಿದೆ. ಭೀಮಪ್ಪ ಮುತ್ತಲಗಿ ತನ್ನ ಪತ್ನಿ ಮಂಜುಳಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬರ್ಬರವಾಗಿ ಹತ್ಯೆ ಮಾಡಿದ ಭೀಮಪ್ಪ ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಈ ದುರ್ಘಟನೆಗೆ ದಂಪತಿ ಮಧ್ಯೆಯಿದ್ದ ಕೌಟುಂಬಿಕ ಕಲಹವೆ ಕಾರಣವೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.