ವಿಜಯಪುರ: ಸಚಿವ ಕೆ.ಎಸ್. ಈಶ್ವರಪ್ಪ ಕೀಳುಮಟ್ಟಕ್ಕೆ ಹೋಗೋರು ಅಲ್ಲ ಎಂದು ಕೆಎಸ್ಈ ಪರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬ್ಯಾಟಿಂಗ್ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ ಆತ್ಮಹತ್ಯೆಗೆ ಯಾರು ಸಂಬಂಧ ಇಲ್ಲ. ಆತ್ಮಹತ್ಯೆ ಅನೇಕ ಕಾರಣ ಇರ್ತಾವೆ ಎಂದರು. ಇನ್ನು ಇನ್ಮುಂದೆ ಎಲ್ಲರು ಹಾಗೇ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತಾರೆ. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಆದ್ರೇ, ಸಂತೋಷ ಪಾಟೀಲ್ ಆತ್ಮಹತ್ಯೆ ಹಿಂದೆ ಕಾಂಗ್ರೆಸ್ ಕೈವಾಡ ಎಂದು ಹೊಸ ಬಾಂಬ್ ಹಾಕಿದರು. ಕಾಂಗ್ರೆಸ್ ನವರು ಇಂಥವನೊಬ್ಬನನ್ನ ರೆಡಿ ಮಾಡ್ತಾರೆ, ಅವನಿಂದ ಹೇಳಿಕೆ ಕೊಡಿಸ್ತಾರೆ. ಇಂತಹವು ರಾಜಕಾರಣಿದಲ್ಲಿ ಬಹಳ ನಡೆಯುತ್ವೆ ಎಂದರು.