K1N ಡೆಸ್ಕ್: ಪಿಂಕ್(Pink) ವಾಟ್ಸಪ್(WhatsApp) ಅನ್ನೋ ದೊಡ್ಡದೊಂದು ಸ್ಕ್ಯಾಮ್ ಆರಂಭವಾಗಿದೆ. ಕಳೆದ ಕೆಲ ವಾರಗಳಿಂದ ಎಲ್ಲರ ಮೊಬೈಲ್ಗಳಿಗೆ ಪಿಂಕ್ ವಾಟ್ಸಪ್ ಲಿಂಕ್ಗಳು ಬರತೊಡಗಿವೆ. ವಾಟ್ಸಪ್ಗಿಂತ ಪಿಂಕ್ ವಾಟ್ಸಪ್ನಲ್ಲಿ ಎಕ್ಸ್ಟ್ರಾರ್ಡಿನರಿ ಫೀಚರ್ಸ್ ಇದೆ. ಡೌನ್ಲೋಡ್ ಮಾಡಿಕೊಳ್ಳಿ ಅಂತ ಲಿಂಕ್ಗಳು ಬರುತ್ತಿವೆ. ಒಮ್ಮೆ ಈ ಲಿಂಗ್ ಒತ್ತಿದ್ರೆ, ಸಾಫ್ಟ್ವೇರ್ ಒಂದು ಹೈ ಸ್ಪೀಡ್ನಲ್ಲಿ ಡೌನ್ಲೋಡ್ ಆಗುತ್ತೆ. ಲಾಗಿನ್ ಆಗಲು ನಿಮ್ಮ ಮೊಬೈಲ್ ನಂಬರ್ ಕೇಳುತ್ತೆ. ಅಷ್ಟೇ ನಂಬರ್ ಕೊಟ್ಮೇಲೆ ನಿಮ್ಮನ್ನು ಹೇಳೋರು ಕೇಳೋರು ಯಾರೂ ಇರೋದಿಲ್ಲ. ಪಿಂಕ್ ವಾಟ್ಸಾಪ್ ಡೌನ್ ಆದ ಕೆಲ ನಿಮಿಷದಲ್ಲೇ ಸ್ಥಗಿತಗೊಳ್ಳುತ್ತದೆ. ನೀವು ಚಾಟ್ ಮಾಡದಿದ್ದರೂ ನಿಮ್ಮ ಕಾಂಟಾಕ್ಟ್ ಲಿಸ್ಟ್ ಸೇರಿದಂತೆ ಮೊಬೈಲ್ನಲ್ಲಿರೋ ಕಂಪ್ಲೀಟ್ ಡಾಟಾ ಸಾಫ್ಟ್ವೇರ್ಗೆ ಸಪ್ಲೈ ಆಗಿರುತ್ತದೆ. ಫೋಟೋ, ಒಟಿಪಿ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲಾ ಕ್ಷಣಾರ್ಧದಲ್ಲಿ ಖತಂ ಆಗಿಬಿಡುತ್ತದೆ. ಮೇಸೇಜಿಂಗ್ ಸಾಫ್ಟ್ವೇರ್ ಮೂಲಕ ನಿಮ್ಮ ಇಡೋ ಮೊಬೈಲ್ ಹ್ಯಾಕ್ ಆಗಿರುತ್ತದೆ. ಅದಕ್ಕಾಗಿ ಹುಷಾರು ಹುಷಾರು..