ವಿಜಯಪುರ: ಸಂಶಯಾಸ್ಪದ ಕಾರವೊಂದು ಪತ್ತೆಯಾಗಿರುವ ಘಟನೆ ವಿಜಯಪುರದ ಅಯ್ಯಪ್ಪ ನಗರದಲ್ಲಿ ನಡೆದಿದೆ. KA 04 AA1980 ನಂಬರಿನ ಕಾರು ಪತ್ತೆಯಾಗಿದೆ.
ಅಯ್ಯಪ್ಪ ನಗರದಲ್ಲಿ ಕಳೆದ ಒಂದು ವಾರದಿಂದ ಕಾರು ನಿಲ್ಲಿಸಲಾಗಿದೆ. ಆದ್ರೇ, ಕಾರಿನ ಮಾಲೀಕರು ಮಾತ್ರ ಯಾರು ಎಂಬುದು ಪತ್ತೆಯಾಗಿಲ್ಲ. ಅದಕ್ಕಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದಕ್ಕಾಗಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೂ ಸದರಿ ಕಾರನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಗಾಂಧಿಚೌಕ ಠಾಣೆಗೆ ಕಾರನ್ನು ಒಪ್ಪಿಸಿದರು. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.