ವಿಜಯಪುರ: ಅಬಕಾರಿ ಪೊಲೀಸ ಅಧಿಕಾರಿ ಹೆಸರಿನಲ್ಲಿ ನಕಲಿ Instagram ಅಕೌಂಟ್ ಮಾಡಿ ಗಣ್ಯರಿಗೆ, ಪತ್ರಕರ್ತರಿಗೆ ಹಣ ಕೇಳುತ್ತಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಅಬಕಾರಿ ಪೊಲೀಸ ಅಧಿಕಾರಿ ಮುಜಾವರ್ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಅಕೌಂಟ್ ಮಾಡಿದ್ದಾರೆ. ಬಳಿಕ ಪತ್ರಕರ್ತರು, ಸ್ನೇಹಿತರಿಗೆ ಅರ್ಜೆಂಟ್ ಇದೇ ಹಣ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಅಲ್ಲದೇ, 5 ಅಥವಾ 10 ಸಾವಿರ ಹಣ ನೀಡಿ ಎಂದು ಮೇಸಜ್ ಮಾಡುತ್ತಿದ್ದಾರೆ. ಅದಕ್ಕಾಗಿ ಇಂತಹ ವಂಚನೆಗಳಿಗೆ ಒಳಗಾಗದಂತೆ ಮುಜಾವರ್ ಹಿತೈಷಿಗಳು ಕೆಒನ್ನ್ಯೂಸ್ಗೆ ಮಾಹಿತಿ ನೀಡಿದ್ದಾರೆ.