ವಿಜಯಪುರ: ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಹೆಸರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದಾಗ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ನಗರದ ಗೋದಾವರಿ ಹೋಟೆಲ್ ಬಳಿ ನಡೆದಿದೆ. ಶಾಂತೇಶ ಕಮತಗಿ, ಮನೋಜಕುಮಾರ ಬವಸೋಡೆ, ಇಕ್ಬಾಲ್ ರೇವುರಕರ ಬಂಧಿತ ಆರೋಪಿಗಳು. ಇನ್ನು ಆರೋಪಿಗಳಿಂದ ಒಂದು ಮೊಬೈಲ್, ಒಂದು ಪುಸ್ತಕ, 3500 ನಗದು ಜಪ್ತಿಗೈದಿದ್ದಾರೆ.
ಅಲ್ಲದೇ, 1 ಸಾವಿರಕ್ಕೆ 2 ಸಾವಿರ ನೀಡುವ ಆಮಿಷ ನೀಡಿದರು. ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಗ್ ಬ್ಯಾಷ್ ಕ್ರಿಕೆಟ್ ಬೆಟ್ಟಿಂಗ್.. ಮೂವರು ಲಾಕ್…
![](https://karnataka1news.com/wp-content/uploads/2022/12/shutterstock_526404799-1.jpg)