ವಿಜಯಪುರ: ಮನೆಯ ಎದುರು ನಿಲ್ಲಿಸಿದ ಬೈಕ್ ಕಳ್ಳತನಗೈದು ಕಳ್ಳನೋರ್ವ ಎಸ್ಕೇಪ್ ಆಗಿರುವ ಘಟನೆ ವಿಜಯಪುರ ನಗರದ ಬಡಿಕಮಾನ್ ಬಳಿ ಗುರುವಾರ ನಡೆದಿದೆ. ರಾಜೇಸಾಬ್ ಉಕ್ಕಲಿ ಎಂಬುವರ KA 28 EF 3087 ನಂಬರಿನ ಬೈಕ್ ಕಳ್ಳತನ ಆಗಿದೆ. ಬೈಕ್ನ್ನು ಮನೆಯ ಎದುರು ನಿಲ್ಲಿಸಿದ ವೇಳೆ ಬೈಕ್ ಕಳ್ಳತನ ಆಗಿದೆ. ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.