ವಿಜಯಪುರ: ಬೈಕ್ ಕಳ್ಳತನ ಮಾಡುತ್ತಿದ್ದ ಓರ್ವ ಬೈಕ್ ಕಳ್ಳನ್ನು ಬೈಕ್ ಸಮೇತ ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮೊರಟಗಿ ಬೈಪಾಸ್ ಬಳಿ ನಡೆದಿದೆ. ಮಾಳಪ್ಪ ಭೀಮಣ್ಣ ಜಂಬಗಿ (22) ಬಂಧಿತ ಬೈಕ್ ಕಳ್ಳ. ಬಂಧಿತ ಮಾಳಪ್ಪ ಕದ್ದಿರುವ ನಾಲ್ಕು ಬೈಕ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿವಿಧ ಕಂಪನಿಯ 1.65 ಲಕ್ಷ ಮೌಲ್ಯದ ನಾಲ್ಕು ಬೈಕ್ಗಳನ್ನು ಜಪ್ತಿಗೈದಿದ್ದಾರೆ. ಅಲ್ಲದೇ, ಮಾಳಪ್ಪನ ವಿರುದ್ಧ ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/11/IMG_20231125_114914-1024x464.jpg)