ವಿಜಯಪುರ: ಬೈಕ್, ನೀರಿನ ಪಂಪ್ಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ತಾಲ್ಲೂಕಿನ ಮಹಾಲ್ ಐನಾಪುರ ಗ್ರಾಮದಲ್ಲಿ ನಡೆದಿದೆ. ಶಿವಾನಂದ ಪ್ರೇಮಸಿಂಗ್ ಚವ್ಹಾಣ ಬಂಧಿತ ಆರೋಪಿ. ಇನ್ನೂ ಆರೋಪಿಯಿಂದ 1 ಲಕ್ಷ 77 ಸಾವಿರದಾ 700 ರೂಪಾಯಿ ಮೌಲ್ಯದ ಒಂದು ಬೈಕ್, 5 ನೀರಿನ ಪಂಪ್ಗಳನ್ನು ಜಪ್ತಿಗೈದಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.