ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಚದುರಂಗ ಆಟವಾಡಿ ಬಿಜೆಪಿ ಬಹುಮತ ಪಡೆಯುತ್ತದೆ ಎಂದು ವಿಜಯಪುರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಎಲ್ಲ ಲೆಕ್ಕಾಚಾರದ ಬಳಿಕ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಬೇರೆ ಪಕ್ಷದವರು ಚದುರಂಗ ಆಟ ಆಡ್ತಾರೆ. ಅದೇ ತರಹ ನಾವು ಚದುರಂಗ ಆಟ ಆಡುತ್ತೇವೆ ಎಂದರು. ಇನ್ನು ಬಿಜೆಪಿಗೆ ಬಂದ್ರೇ ಗಂಗಾ ನದಿಯಲ್ಲಿ ಸ್ನಾನ ಮಾಡಿ ಪವಿತ್ರ ಆಗ್ಯಾರೆ ಅಂತ ತಿಳ್ಕೋಬೇಕು. ಬಿಜೆಪಿ ಗಂಗಾನದಿ, ಬಿಜೆಪಿ ಪವಿತ್ರ ನದಿ, ಸ್ನಾನ ಮಾಡಿದವರು ಪವಿತ್ರ ಆಗ್ತಾರೆ ಎಂದರು.