ವಿಜಯಪುರ: ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ವಿಜಯಪುರದ ಕೀರ್ತಿ ನಗರದಲ್ಲಿ ನಡೆದಿದೆ. 65 ವರ್ಷದ ಕಾಂತು ರೆಡ್ಡಿ ಮೃತಪಟ್ಟಿರುವ ದುರ್ದೈವಿ. ಇನ್ನು ಇದು ಕೊಲೆಯೋ ಅಥವಾ ಸಹಜ ಸಾವು ಎಂಬುದು ಪೊಲೀಸ ತನಿಖೆ ಬಳಿಕ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.