![](https://karnataka1news.com/wp-content/uploads/2024/01/IMG-20240106-WA0015-1024x923.jpg)
ವಿಜಯಪುರ: ವಿಜಯಪುರದ ಗೋಳಗುಮ್ಮಟ ಕಚೇರಿಗೆ ಹುಸಿ ಬಾಂಬ್ ಇ-ಮೇಲ್ನ್ನು ಕಿಡಿಗೇಡಿಗಳು ಸಂದೇಶ ರವಾನಿಸಿದ್ದಾರೆ. ಗೋಳಗುಮ್ಮಟ ಎದುರಿನ ಮ್ಯೂಜಿಯಂನಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ ಸಂದೇಶ ಕಳುಹಿಸಿದ್ದಾರೆ. ಮ್ಯೂಜಿಯಂನ ಹಲವು ಜಾಗೆಯಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆಯನ್ನು
ಟೆರರೈಸರ್ಸ್ ಗ್ರುಪ್ ಹೆಸರಲ್ಲಿ ಇ-ಮೇಲ್ ಮಾಡಿದ್ದಾರೆ. ನಿನ್ನೆ ಸಾಯಂಕಾಲ ಇ-ಮೇಲ್ ಸಂದೇಶ ಗೋಳಗುಮ್ಮಟ ಸಿಬ್ಬಂದಿಗಳು ವೀಕ್ಷಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ತಡರಾತ್ರಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮಾಡಿದ್ದಾರೆ. ಯಾವುದೇ ಬಾಂಬ್ ಪತ್ತೆ ಇಲ್ಲ, ಇದೊಂದು ಹುಸಿ ಬಾಂಬ್ ಕರೆ ಅನ್ನೋದು ಪೊಲೀಸರು ಖಚಿತ ಪಡೆಸಿಕೊಂಡಿದ್ದಾರೆ. ಟೆರರೈಸರ್ಸ್ ಹೆಸ್ರಲ್ಲಿ ಬಂದ ಇ ಮೇಲ್ ಸಂದೇಶದ ಬಗ್ಗೆ ಗೋಳಗುಮ್ಮಟ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)