ವಿಜಯಪುರ: ಸ್ಮಶಾನದಲ್ಲಿ ಗೆಳೆಯನ ಹತ್ಯೆಗೈದಿದ್ದ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ನಗರದ ಮುರ್ತುಜ್ ಖಾದ್ರಿ ದರ್ಗಾದ ಖಬರಸ್ತಾನದಲ್ಲಿ ಸ್ಮಶಾನದಲ್ಲಿ ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಗೆಳೆಯ ಶಿವರಾಜ್ ಶಿರಾಳಶೆಟ್ಟಿನ್ನು ನಿನ್ನೆ ರಾತ್ರಿ ಹತ್ಯೆ ಮಾಡಲಾಗಿತ್ತು. ಪೊಲೀಸರು 24 ಗಂಟೆಯ ಒಳಗೆ ಶೇಖರ ಸೋನಾರ ಹಾಗೂ ಯಾಸೀನ ಕನ್ನೂರ ಆರೋಪಿಗಳನ್ನು ಬಂಧಿಸಿದ್ದಾರೆ. ಶಿವರಾಜ್ ಹಾಗೂ ಯಾಸೀನ ಮಧ್ಯೆ ಜಗಳ ಹಿನ್ನೆಲೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದರು. ಸಾಕ್ಷಿ ನಾಶ ಮಾಡಲು ಭೂಮಿಯಲ್ಲಿ ಮಣ್ಣು ಹಾಕಿ ಮಚ್ಚಲು ಯತ್ನಿಸಿದರು. ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.