ವಿಜಯಪುರ: ಮೂರ್ಚೆ ರೋಗದಿಂದ ಬಾಲಕನೊರ್ವ ಈಜುಗೊಳದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ವಿಜಯಪುರದ ಬಾಗಕೋಟ ರಸ್ತೆಯಲ್ಲಿರುವ ಸ್ವಿಮ್ಮಿಂಗ್ ಫುಲ್ನಲ್ಲಿ ನಡೆದಿದೆ. ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಸಂಭಾಜಿ ಮಲ್ಲಪ್ಪ ಜಾಧವ (15) ಮೃತಪಟ್ಟ ಬಾಲಕ. ಶಾಲೆ ಹಾಗೂ ಸ್ವಿಮ್ಮಿಂಗ್ ಕಲಿಯಲು ವಿಜಯಪುರದಲ್ಲಿ ವಾಸವಾಗಿದ್ದನು. ಇನ್ನೂ ಆಟವಾಡುತ್ತಾ ಸ್ವಿಮ್ಮಿಂಗ್ ಫೂಲ್ ಬಳಿ ಹೋಗಿದ್ದಾನೆ. ಆ ವೇಳೆ ಫಿಟ್ಸ್ ಬಂದಿದ್ದರಿಂದ ಈಜುಗೊಳದಲ್ಲಿ ಬಿದ್ದಿದ್ದಾನೆ. ಇದರಿಂದ ಮೃತಪಟ್ಟಿದ್ದಾನೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.