ವಿಜಯಪುರ: ರಂಗಿನೋಕುಳಿಗೆ ನೀರು ತರಲು ಹೋಗಿದ್ದ ಬಾಲಕ ವಿದ್ಯುತ್ ತಗುಲಿ ನೀರಿನ ಟಾಕಿಗೆ ಬಿದ್ದು ಸಾವಿಗೀಡಾದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಳೇವಾಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಹೋಳಿ ಹಬ್ಬದ ನಿಮಿತ್ತ್ಯ ಬಣ್ಣ ಆಡುವಾಗ ನೀರು ತುಂಬಲು ಹೋಗಿ ಗ್ರಾಮ ಪಂಚಾಯತಿ ನಿರ್ಮಿಸಿರುವ ನೀರಿನ ಟಾಕಿಗೆ ಬಿದ್ದು ಬಾಲಕ ಸಾವಿಗೀಡಾಗಿದ್ದಾನೆ. ಮೃತ ಬಾಲಕನನ್ನು ಹಣಮಂತ ಬೀರಪ್ಪ ವಾಲಿಕಾರ (12) ಎಂದು ಗುರುತಿಸಲಾಗಿದೆ.
ವಿದ್ಯುತ್ ತಂತಿ ಕಟ್ ಆದ ಪರಿಣಾಮ ಬಾಲಕನಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಗೆ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯತೆಯೇ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಕೂಡಗಿ ಎನ್.ಟಿ.ಪಿ.ಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.