K1N ಡೆಸ್ಕ್: ಬ್ರೆಜಿಲ್ ತಂಡದ ಲೆಜೆಂಡ್ ಪೆಲೆ (82) ಅಸುನೀಗಿದ್ದಾರೆ. ಕ್ಯಾನ್ಸರ್ನಿಂದಾಗಿ ಫುಟ್ಬಾಲ್ ದೈತ್ಯ ಕೊನೆಯುಸಿರೆಳೆದಿದ್ದಾರೆ. ಬ್ರೆಜಿಲ್ಗೆ ಹ್ಯಾಟ್ರಿಕ್ ವಿಶ್ವಕಪ್ (1958, 1962 ಮತ್ತು 1970) ಜಯಿಸಲು ಪೆಲೆ ಅವರ ಆಟವೇ ಮುಖ್ಯವಾಗಿತ್ತು. ಅಲ್ಲದೇ, ಬ್ರೆಜಿಲ್ ತಂಡದ ಪರವಾಗಿ ಅತಿ ಹೆಚ್ಚು ಗೋಲು ಗಳಿಸಿದ್ದರು. ಪೆಲೆ ಕರುಳಿನ ಕ್ಯಾನ್ಸರ್ ಉಲ್ಬಣಿಸಿದ್ದು ಮೂತ್ರಪಿಂಡ ಮತ್ತು ಹೃದಯಕ್ಕೆ ಸೋಂಕು ವ್ಯಾಪಿಸಿತ್ತು. ಇದರಿಂದ ಇಂದು ನಿಧನರಾಗಿದ್ದಾರೆ.