ವಿಜಯಪುರ: ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಋಷಿಕೇಸ್ ಸೋನವಾಣೆ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಯಾಸೀನ್ ಪಟೇಲ ಬಂಧಿತ ಆರೋಪಿ. ಇನ್ನು ಸಿಂದಗಿ ನಾಕಾ ಬಳಿ ಸಂಶಯಾಸ್ಪದ ರೀತಿಯಲ್ಲಿ ನಂಬರ ಪ್ಲೇಟ್ ಇಲ್ಲದ ಬುಲೇರೋ ವಾಹನದಲ್ಲಿ ಹೋಗುತ್ತಿದ್ದ ವೇಳೆ ಪೊಲೀಸರು ದಾಳಿಗೈದಿದ್ದಾರೆ. ಬಂಧಿತನಿಂದ ಒಂದು ಮಹಿಂದ್ರಾ ಬುಲೇರೊ, ಒಂದು ಮಹಿಂದ್ರಾ ಟಿಯುವಿ 300 ಹಾಗೂ ಒಂದು ಮಾರುತಿ ಸುಜುಕಿ ಸ್ವೀಫ್ಟ್ ಡಿಜೈರ್ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)