ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ನೌಕರರ ಪ್ರತಿಭಟನೆಗೆ ಸರ್ಕಾರ ವೇತನ ಶೇ.17ರಷ್ಟು ಹೆಚ್ಚಳಿಸಿ ಆದೇಶ ಮಾಡಿದೆ. ಇದೀಗ್ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಸಿಕ್ಕಿದೆ. ಸರ್ಕಾರ ಮಧ್ಯಂತರ ಪರಿಹಾರದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ ತಾತ್ಕಾಲಿಕ ಪರಿಹಾರ ಮಂಜೂರಾಗಿದ್ದು, 7ನೇ ವೇತನ ಆಯೋಗದ ವರದಿ ಕಾಯ್ದಿರಿಸಿ ಆದೇಶ ನೀಡಿದ್ದಾರೆ. ಆರ್ಥಿಕ ಇಲಾಖೆ ಕಾರ್ಯದರ್ಶಿ ಜಯಶ್ರೀ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆ, ಅನುದಾನಿತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೆ ಮಧ್ಯಂತರ ಪರಿಹಾರ ಅನ್ವಯವಾಗಿದೆ. 2023ರ ಏಪ್ರಿಲ್ 1ರಿಂದ ಮಧ್ಯಂತರ ಪರಿಹಾರ ಜಾರಿಯಾಗಿದ್ದು, ಮಧ್ಯಂತರ ಪರಿಹಾರ ಮೂಲ ವೇತನ ಬಡ್ತಿಗೂ ಅನ್ವಯವಾಗುವಂತಿದೆ.