ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದ ಮಂಟೂರ ಮನೆತನದ ಶತಾಯುಷಿ ಕಮಲಮ್ಮ ಮಂಟೂರು (101) ಅವರ ಜನ್ಮಶತಾಭ್ದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಮಾರಂಭದಲ್ಲಿ ಜ್ಞಾನಮಯಾನಂದ ಮಹಾಸ್ವಾಮಿಗಳು, ಅಮಲಝರಿ, ಗುಣದಾಳದ ಶ್ರೀಮಠದ ವಿವೇಕಾನಂದ ಶ್ರೀಗಳು, ಉಮೇಶ ಶಾಸ್ತ್ರಿಗಳ ನೇತೃತ್ವದಲ್ಲಿ ನಡೆಯಿತು.
ಕಮಲಮ್ಮನವರು ಮಂಟೂರು ಮನೆತನದ ದಿವಂಗತ ಹನುಮಪ್ಪ ರಂ. ಮಂಟೂರ ಅವರ ಧರ್ಮಪತ್ನಿಯಾಗಿ, ರೈತ ಕುಟುಂಬದ ಸೊಸೆಯಾಗಿ, ತುಂಬು ಕುಟುಂಬದ ಜವಾಬ್ದಾರಿ ಹೊತ್ತು, ಸಂಸಾರವನ್ನು ಮುನ್ನಡೆಸಿ, ಇಂದು ಶತಾಯುಷ್ಯರಾಗಿದ್ದಾರೆ. ಇವರು ನಾಲ್ಕು ಮಕ್ಕಳು, 8 ಜನ ಮೊಮ್ಮಕ್ಕಳು ಹಾಗೂ 9 ಜನ ಮರಿಮೊಮ್ಮಕ್ಕಳನ್ನು ಹೊಂದಿದ್ದಾರೆ. ಕಾರ್ಯಕ್ರಮದಲ್ಲಿ ಮಂಟೂರ ಮನೆತನದ ಸಕಲ ಬಂಧು ಬಾಂಧವರು ಹಾಗೂ ಜೈನಾಪೂರ ಗ್ರಾಮದ ಗ್ರಾಮಸ್ಥರು ಇದ್ದರು.