ವಿಜಯಪುರ: ವಿಜಯಪುರ ನಗರಕ್ಕೆ ಚಡ್ಡಿ ಗ್ಯಾಂಗ್ ಎಂಟ್ರಿ ನೀಡಿದೆ. ಸಾರ್ವಜನಿಕರು ಚಡ್ಡಿ ಗ್ಯಾಂಗ್ನಿಂದ ಎಚ್ಚರಿಕೆ ವಹಿಸುವಂತೆ ಪೊಲೀಸ ಇಲಾಖೆಯಿಂದ ಸೂಚನೆ ನೀಡಿದ್ದಾರೆ. ಅಲ್ಲದೇ, ಚಡ್ಡಿ, ಮಾಸ್ಕ್ ಧರಿಸಿ ಚಡ್ಡಿ ಗ್ಯಾಂಗ್
ಮನೆ ಕಂಪೌಂಡ್ಗೆ ನುಗ್ಗುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆ ಆಗಿದೆ. 5 ರಿಂದ 8 ಜನರು ಈ ಗ್ಯಾಂಗ್ ನಲ್ಲಿ ಇದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆಗೆ ನುಗ್ಗಿ ದರೋಡೆ ಮಾಡುವ ಚಡ್ಡಿ ಗ್ಯಾಂಗ್ ಇದಾಗಿದೆ.
ಅದಕ್ಕಾಗಿ ಇದರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಪೊಲೀಸ ಇಲಾಖೆಯಿಂದ ಜಾಗೃತಿ ಮೂಡಿಸಿದ್ದಾರೆ. 9480804200 ಅಥವಾ 112 ಗೆ ಕರೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ.