ವಿಜಯಪುರ: ಚಂದ್ರಯಾನ 3 ಯಶಸ್ಸು ಹಿನ್ನೆಲೆ ವಿಜಯಪುರ ಮೂಲದ ಇಸ್ರೋ ವಿಜ್ಞಾನಿ ಮನೆಯಲ್ಲಿ ಕುಟುಂಬಸ್ಥರು ಸಂಭ್ರಮಿಸಿದರು. ಇಸ್ರೋ ವಿಜ್ಞಾನಿ ಅಭಿಷೇಕ್ ದೇಶಪಾಂಡೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಅಭಿಷೇಕ್ ದೇಶಪಾಂಡೆ ವಿಜ್ಞಾನಿಯಾಗಿದ್ದಾರೆ. ಚಂದ್ರಯಾನ -3ಸಕ್ಸಸ್ ಹಿನ್ನೆಲೆ, ಕುಟುಂಬಸ್ಥರು, ಸಂಬಂಧಿಗಳಿಂದ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದ ತಾಜ್ ಬಾವಡಿ ಬಳಿಯಲ್ಲಿ ಅಭಿಷೇಕ್ ದೇಶಪಾಂಡೆ ಮನೆ ಇದೆ. ಇನ್ನು ಕುಟುಂಬ ಸದಸ್ಯರನ್ನು ಜನರು ಭೇಟಿಯಾಗಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.
![](https://karnataka1news.com/wp-content/uploads/2023/08/IMG_20230824_101213-1024x347.jpg)