K1N ಡೆಸ್ಕ್: ಚಿಕನ್ ಪ್ರಿಯರೇ ಎಚ್ಚರ ಎಚ್ಚರ ಎಚ್ಚರ.. ಚಿಕನ್ ತಿನ್ನುವ ಮುನ್ನವೇ ಈ ಸ್ಟೋರಿ ಓದಿ.. ಹೌದು..! ಕೇರಳದಲ್ಲಿ ಹಕ್ಕಿ ಜ್ವರ ಕಂಡುಬಂದಿದ್ದು, ಹಕ್ಕಿ ಜ್ವರದಿಂದ ಕೋಯಿಕ್ಕೋಡ್ ಫಾರ್ಮ್ವೊಂದರಲ್ಲಿ ಸಾವಿರಾರು ಕೋಳಿ ಸಾವನಪ್ಪಿವೆ ಎಂದು ವರದಿ ಆಗಿದೆ. 2000ಕ್ಕೂ ಹೆಚ್ಚು ಕೋಳಿಗಳ ಸಾವಿನಿಂದ ಆತಂಕ ಆರಂಭವಾಗಿದೆ. ಕೋಳಿಗಳಲ್ಲಿ H5N1 ಸೋಂಕು ಇರುವುದು ದೃಢ ಪಟ್ಟಿದೆ. ಈ ಕುರಿತು ಭೋಪಾಲ್ ಲ್ಯಾಬ್ನಲ್ಲಿ 4000ಕ್ಕೂ ಹೆಚ್ಚು ಕೋಳಿಗಳನ್ನು ತಜ್ಞರು ಪರೀಕ್ಷೆ ಮಾಡಿದ್ದಾರೆ. 2000ಕ್ಕೂ ಹೆಚ್ಚು ಕೋಳಿಗಳಲ್ಲಿ H5N1 ಸೋಂಕು ಪತ್ತೆಯಾಗಿದೆ. ಹೀಗಾಗಿ ಕೇರಳ ಗಡಿ ಭಾಗದಲ್ಲಿ ಹಕ್ಕಿಜ್ವರದ ಅಲರ್ಟ್ ಆಗಿದ್ದಾರೆ.