ವಿಜಯಪುರ: ಚಿಕ್ಕೋಡಿ ಮೊದಲು ಜಿಲ್ಲೆಯಾಗಲಿ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಮೊದಲು ಚಿಕ್ಕೋಡಿ ಜಿಲ್ಲೆಯಾಗಲಿ. ತದನಂತರ ಅಥಣಿ, ತೆಲಸಂಗ ಬೇಕಾದ್ರೆ ಮಾಡಿಕೊಳ್ಳಿ. ಇನ್ನು ಬ್ರಿಟಿಷರು ಎಸಿ ಕಚೇರಿ ಮಾಡಿದ್ದರು. ಅದಕ್ಕಾಗಿ ಚಿಕ್ಕೋಡಿ, ಬೈಲಗೊಂಹಲ್, ಬೆಳಗಾವಿ ಮೂರು ಜಿಲ್ಲೆಗಳಾಗಲಿ. ಆದ್ರೇ, ಮೊದಲು ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆಯಾಗಬೇಕು. ಇನ್ನು ಬ್ರಿಟಿಷರಿದ್ದ ಸಮಯದಲ್ಲೆ ಚಿಕ್ಕೋಡಿ, ಬೈಲಹೊಂಗಲಕ್ಕೆ ಎಸಿ ಕಚೇರಿ ಇವೆ. ಅದು ನಾನು ಮಾಡಿದ್ದಲ್ಲ ಎಂದರು.