ವಿಜಯಪುರ: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚಾಗಿದೆ. ಇನ್ನೂ ಪುಟ್ಟ ಪುಟ್ಟ ಮಕ್ಕಳು ಹಾಗೂ ಯುವಕರನ್ನೇ ಮಹಾಮಾರಿ ಕೋವಿಡ್ ಟಾರ್ಗೆಟ್ ಮಾಡುತ್ತಿದೆ. ಜನವರಿ 1 ರಿಂದ ಜನವರಿ 18 ರವರೆಗೆ ಒಟ್ಟು 249 ಮಕ್ಕಳು ಹಾಗೂ ಯುವಕರಲ್ಲಿ ಕೊರೋನಾ ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮಾಹಿತಿ ನೀಡಿದರು. 0 ರಿಂದ 1 ವರ್ಷದ ಇಬ್ಬರು ಮಕ್ಕಳು, 2 ರಿಂದ 5 ವರ್ಷದ 7 ಮಕ್ಕಳು, 6 ರಿಂದ 10 ವರ್ಷದ 21 ಮಕ್ಕಳಲ್ಲಿ, 11 ರಿಂದ 15 ವರ್ಷದ 96 ಮಕ್ಕಳು, 16 ರಿಂದ 18 ವರ್ಷದ 58 ಮಕ್ಕಳು ಹಾಗೂ 18 ರಿಂದ 21 ವರ್ಷದ 65 ಯುವಕರಲ್ಲಿ ಕೊರೋನಾ ದೃಢವಾಗಿದೆ ಜಿಲ್ಲಾಡಳಿತದಿಂದ ಮಾಹಿತಿ ಲಭ್ಯವಾಗಿದೆ.