ವಿಜಯಪುರ: ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಅತಾಲಟ್ಟಿ ಗ್ರಾಮದ ಪ್ರಮೋದ ಸುಭಾಸ ಬೀಳೂರ (12) ಹಾಗೂ ಸಂತೋಷ ಶಾಸು ಬೀಳೂರ (9) ಕೃಷಿ ಹೊಂಡ ಪಾಲಾದ ಮಕ್ಕಳು. ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದ ರೈತರ ತೋಟದಲ್ಲಿ ಕೃಷಿ ಕೆಲಸಕ್ಕಿದ್ದರು. ಕೃಷಿ ಹೊಂಡದಲ್ಲಿ ಬಿದ್ದಿರುವ ತೆಂಗಿನ ಆಸೆಗಾಗಿ ಎರಡೂ ಮಕ್ಕಳು ಕೃಷಿ ಹೊಂಡದ ಬಳಿ ಈ ಘಟನೆ ಸಂಭವಿಸಿದೆ. ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.