ವಿಜಯಪುರ: ಬೈಕ್ ಹಾಗೂ ಸಿಗರೆಟ್ ಕಳ್ಳತನಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಜಮಖಂಡಿ ನಿವಾಸಿ ಇಮ್ರಾನ ಕಾಟಿಕ್ ಬಂಧಿತ ಆರೋಪಿ. ಇನ್ನೂ ಆರೋಪಿಯಿಂದ 5 ಲಕ್ಷ ಮೌಲ್ಯದ 10 ಬೈಕ್ ಹಾಗೂ ಕಿರಾಣಿ ಅಂಗಡಿಯಲ್ಲಿ ಕಳ್ಳತನ ಮಾಡಿದ 5 ಸಾವಿರ ಮೌಲ್ಯದ ಸಿಗರೆಟ್ ಕಳ್ಳತನಗೈದು ಪರಾರಿಯಾಗಿದ್ದನು. ಇದೀಗ್ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಬೈಕ್, ಸಿಗರೆಟ್ ಜಪ್ತಿಗೈದಿದ್ದಾರೆ. ಈ ಕುರಿತು ದೇವರಹಿಪ್ಪರಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.