ವಿಜಯಪುರ: ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಗೆ ಚಹಾ ಕುಡ್ಯಾಗ್ ಹೊಗ್ತಾರೆ ಬರ್ತಾರೆ ಅಷ್ಟೆ ಎಂದು ಸರ್ಕಾರದ ವಿರುದ್ಧ ಮತ್ತೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಅದು ಕನಸಿನ ಕೂಸು ಇದೆ. ಅದರ ಬಗ್ಗೆ ಯಾಕೇ ವಿಚಾರ ಮಾಡಬೇಕು.ಸಚಿವ ಸಂಪುಟ ಆಗುವುದಿಲ್ಲ. ಅದಕ್ಕಾಗಿ ಗಾಡಿ ಹಿಂಗ್ ಜಗ್ಗುವುದು ಎಂದು ಶಾಸಕ ಯತ್ನಾಳ ಹೇಳಿದರು.