ವಿಜಯಪುರ: ಕೋಲ್ಡ್ ಡ್ರಿಂಗ್ಸ್ನಲ್ಲಿ ನಿದ್ದೆ ಮಾತ್ರೆ ಬೆರೆಯಿಸಿ ನಂತರ ಗಂಡನ್ನು ಸೀರೆಯಿಂದ ಹತ್ಯೆಗೈದಿರುವ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ಮಾಹಿತಿ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಪ್ರಕಾಶ ಹಳ್ಳಿಯನ್ನು ಹೆಂಡತಿ ರಾಜೇಶ್ವರಿ ಹಳ್ಳಿ ಹಾಗೂ ಸಹಚರರು ಹತ್ಯೆಗೈದಿದ್ದರು. ರಾಜೇಶ್ವರಿ, ರವಿ ಮಧ್ಯೆ ಅನೈತಿಕ ಸಂಬಂಧವಿತ್ತು. ಅದಕ್ಕಾಗಿ ಗಂಡ ಪ್ರಕಾಶ, ರಾಜೇಶ್ವರಿ ಮಧ್ಯೆ ಗಲಾಟೆ ಪದೇ ಪದೇ ಗಲಾಟೆಯಾಗುತ್ತಿದ್ದು, ಅದಕ್ಕಾಗಿ ಪ್ರಕಾಶನ್ನು ಹತ್ಯೆ ಮಾಡಲಾಗಿದೆ. ರಾಜೇಶ್ವರಿ ಹಳ್ಳಿ, ರವಿ ತಳವಾರ, ಗುರಪ್ಪ ದಳವಾಯಿ ಬಂಧನ ಮಾಡಲಾಗಿದೆ. ಕೃತ್ಯಕ್ಕೆ ಬಳಿಸಿದ ಎರಡು ಮೊಬೈಲ್, ಪಾಲಿಸ್ಟರ್ ಸೀರೆ ಜಪ್ತಿಗೈದಿದ್ದಾರೆ. ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.