ಬೆಂಗಳೂರು:
ಇತ್ತೀಚೆಗೆ, ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಹಾಗೂ ಸರ್ಕಾರ ಹಾಗೂ ವಿರೋಧ ಪಕ್ಷದ ನಡುವೆ ಹೊಸ ವಾಕ್ಸಮರಕ್ಕೆ ಕಾರಣವಾಗಿರುವ ಮುಡಾ ಸೈಟು ಹಗರಣ ಭಾರೀ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಭೂ ಮಾಲೀಕರಿಂದ ಭೂಮಿಯನ್ನು ಪಡೆದು ಬಡಾವಣೆಗಳನ್ನು ಮಾಡಿ, ಭೂ ಮಾಲೀಕರಿಗೆ ಶೇ. 5೦-5೦ ಅನುಪಾತದಲ್ಲಿ ಸೈಟು ಹಂಚಲಾಗಿರುವ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿರುವ ಬಗ್ಗೆ ವಿರೋಧ ಪಕ್ಷದವರು ಆರೋಪ ಮಾಡುತ್ತಿರುವಗಾಲೇ ಮತ್ತೆ ಈಗ ಸರ್ಕಾರ ಕೈಗೊಂಡಿರುವ ವರ್ಗಾವಣೆಯಿಂದ ಮತ್ತಷ್ಟು ಚರ್ಚೆಗೆ ಘ್ರಾಸ್ ವಾಗಿದೆ.
ಹೌದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣವನ್ನು ಬಯಲಿಗೆಳೆದಿರುವ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರನ್ನು ದಿಢೀರನೇ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಸರ್ಕಾರದ ಈ ನಡೆ ವಿರೋಧ ಪಕ್ಷದವರಿಗೆ ಅನುಮಾನ ಹುಟ್ಟಿಸಿದೆ. ಅಸಲಿಗೆ ಸರ್ಕಾರ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ ಹೀಗಾಗಿ ಆ ಪಟ್ಟಿಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಹೆಸರು ಇದ್ದು ತೀರವ ಚರ್ಚೆಗೆ ಘ್ರಾಸ್ ವಾಗಿದೆ.
ಮೈಸೂರಿನ ಹೊಸ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ್ ರೆಡ್ಡಿಯವನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ, ರಾಜೇಂದ್ರ ಅವರನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿದ್ದು, ಇನ್ನು ಮುಂದೆ ಅವರ ಸೇವೆ ಬೆಂಗಳೂರಿನಲ್ಲಿ ಮುಂದುವರಿಯಲಿದೆ.