**೭೬ನೇ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಜಾಗೃತಿ ಕಾರ್ಯಕ್ರಮ**
ವಿಜಯಪೂರ. ದಲಿತ ಸಂಘಟನೆಗಳ ಮಹಾ ಒಕ್ಕೊಟದ ಸಂಯುಕ್ತ ಆಶ್ರಯದಲ್ಲಿ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,
ನಗರದ ಅಂಬೇಡ್ಕರ್ ವೃತ್ತದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ದಲಿತ ಸಂಘಟನೆಯಗಳ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿತು,
ಕಾರ್ಯಕ್ರಮದ ದಿವ್ಯ ಸಾನಿಧ್ಯ ಭೋದಿ ಧಮ್ಮ ಬಂತೇಜಿ ವಿಜಯಪುರ ಇವರು ವಹಿಸಿಕೊಂಡಿದ್ದರು ಪರಶುರಾಮ ಲಂಬು ಅವರ ಅಧ್ಯಕ್ಷತೆಯಲ್ಲಿ ಜರುಗಿತು ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದ ಅಪರ್ ಜಿಲ್ಲಾ ಅಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ಅವರು ದೇಶದ ಪ್ರಗತಿಗೆ ಬಾಬ ಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನವು ತುಂಬಾ ಸಹಕಾರವಾಗಿದೆ ,
ಕಥೆ ಪುರಾಣಗಳನ್ನು ಕೇಳಿ ಟೈಮ್ ಕಳಿಯುವ ಇಗಿನ ಕಾಲದ ಯುವ ಪೀಳಿಗೆ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಬಾಗಿಯಾಗಿರುವುದು ಹೆಮ್ಮೆಯ ಸಂಗತಿ ಭಾರತಿಯ ಸಂವಿಧಾನದ ಅಡಿಯಲ್ಲಿ ಎಲ್ಲಾ ಜಾತಿ ಧರ್ಮದವರು ಸಮಾನ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲಿಕ್ಕೆ ಅವಕಾಶ ಕಲ್ಪಿಸಿ ಕೋಡಲಾಗಿದೆ,
ಭಾರತೀಯ ಸಂವಿಧಾನವು ವಿಶ್ವದಲ್ಲೇ ಶ್ರೇಷ್ಠವಾದ ಲಿಖಿತ ಸಂವಿಧಾನವಾಗಿದೆ ಇದರ ಹಿಂದಿನ ಶ್ರಮ ಯಾರಿಗೂ ಕಾಣದು ದೇಶ ವಿದೇಶಗಳನ್ನು ಸುತ್ತಿ ಎಲ್ಲಾ ದೇಶಗಳ ಧರ್ಮ ಜಾತಿ ಬದುಕುವ ರೀತಿ ಹೀಗೆ ಹತ್ತು ಹಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರಿಗೂ ಸಮಾನ ಹಕ್ಕು ನೀಡುವ ಮೂಲಕ ಭಾರತ ದೇಶದ ವಿಶ್ವವೆ ಮೆಚ್ಚುವಂತ ಸಂವಿಧಾನ ಬರೆದು ಕೊಟ್ಟು ತಮ್ಮ ಜೀವನದ ಹಂಗನ್ನು ತೋರದೆ ದೇಶದ ಅಭಿವೃದ್ಧಿ ಹಿಂದುಳಿದವರ ಏಳಿಗೆಗಾಗಿ ಶ್ರಮಿಸಿದ ಏಕ ಮಾತ್ರ ಜೀವವೆ ಡಾ// ಅಂಬೇಡ್ಕರ್ ಅವರು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದದ್ದೆ ಆದಲ್ಲಿ ದೇಶ ಪ್ರಭುದ್ದ ಭಾರತ ವಾಗುವುದರಲ್ಲಿ ಎರಡು ಮಾತಿಲ್ಲ ಎಂದರು,
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ,ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠ ಅಧಿಕಾರಿಗಳಾದ,ಮಾರಿಹಾಳ ಜಿಲ್ಲಾ ಪಂಚಾಯತ್ ಯೋಜನಾ ಅಧಿಕಾರಿಗಳಾದ,ಬಿ,ಎಸ್ ರಾಠೋಡ,ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ,ಪುಂಡಲೀಕ ಮಾನವರ ಛಲವಾದಿ ನೌಕರ ಸಂಘದ ರಾಜ್ಯಧ್ಯಕ್ಷರಾದ,ಚಿದಾನಂದ ಕಾಂಬಳೆ ,ಮಾನವ ಬಂದುತ್ವ ವೇದಿಕೆಯ ಮುಖಂಡರಾದ ,ಪ್ರಬುಗೌಡ ಪಾಟೀಲ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಯಮನಪ್ಪ ಗುಣಕಿ ನಿರೂಪಿಸಿ ವಂದಿಸಿದರು.