ವಿಜಯಪುರ: ಭ್ರಷ್ಟರು ರಸ್ತೆಗೆ ಬಂದಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಯತ್ನಾಳ ವಾಗ್ದಾಳಿ ಮಾಡಿದರು. ಭ್ರಷ್ಟರು ರಸ್ತೆಗೆ ಬಂದು ಡ್ಯಾನ್ಸ್, ಓಡಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಬಣ್ಣ ಬಯಲು ಆಗುತ್ತಿದೆ. ಎಲ್ಲರನ್ನು ರೋಡಿಗೆ ತರುತ್ತೇವೆ ಎಂದು ಹೇಳಿದೆ. ಅದೇ ತರಹ ರಾಹುಲ್, ಸೋನಿಯಾ ಗಾಂಧಿ ಎಸಿ ಬಿಟ್ಟು ರೋಡಿಗೆ ಬಂದಿದ್ದಾರೆ. ಪಾಪ ಮಾಜಿ ಸಿಎಂ ಸಿದ್ದರಾಮಯ್ಯನ್ನು ಕರ್ಕೊಂಡು ಓಡ್ತಾ ಇದ್ದಾರೆ. ಇದು ಬಿಜೆಪಿ ಸಾಧನೆ ಆಗಿದೆ ಎಂದು ಯತ್ನಾಳ ಹೇಳಿದರು.
ಕೆಲವೊಂದು ಖಾಲಿ ಇರುವ ಖಾತೆಗಳನ್ನು ತಾವೇ ಇಟ್ಟುಕೊಂಡು ಕೂಡಬಾರದು ಎಂದು ಸಿಎಂ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಿದರು. ಸಚಿವ ಸಂಪುಟ ವಿಸ್ತರಣೆ ಅಗಲಿ, ಪುನರ್ ರಚನೆ ಆಗಲಿ ಮಾಡಬೇಕು. ಐದೈದು ಖಾತೆ ಒಬ್ಬ ಮುಖ್ಯಮಂತ್ರಿಗಳು ಇಟ್ಟುಕೊಂಡು ಕೂಡುವುದು ಸರಿಯಲ್ಲ. ಮಾಜಿ ಸಚಿವ
ಈಶ್ವರಪ್ಪನವರ ಮೇಲೆ ಸುಳ್ಳು ಆರೋಪ ಮಾಡಿದ ಕಾರಣ ರಾಜೀನಾಮೆ ನೀಡಿದ್ರೂ. ಈಗ ಅವರಿಗೆ ಸಚಿವ ಸ್ಥಾನ ನೀಡಬೇಕು. ಅದರ ಜೊತೆಗೆ ಬಸವರಾಜ್ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ಕೊಡಬೇಕು. ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ಇಲ್ಲವಾದ್ರೆ ಪಕ್ಷದ ಮೇಲೆ ಇರುವ ನಂಬಿಕೆ ಹೊರಟು ಹೋಗುತ್ತೆ ಎಂದರು.