ವಿಜಯಪುರ: ಗುಮ್ಮಟನಗರಿಯಲ್ಲಿ ಮತ ಎಣಿಕೆ ವಿಜಯಪುರ ನಗರದ ಸೈನಿಕ ಶಾಲೆಯ 4 ಸದನಗಳಲ್ಲಿ ನಡೆಯಲಿದೆ. ಹೊಯ್ಸಳ, ಒಡೆಯರ್, ಆದಿಲ್ ಶಾಹಿ, ವಿಜಯ ನಗರ ಹೆಸರಿನ 4 ಸದನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 8 ಕ್ಷೇತ್ರಗಳು, ಒಂದು ಸದನದಲ್ಲಿ 2 ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಒಂದು ಕ್ಷೇತ್ರದ ಮತ ಎಣಿಕೆಗೆ 14 ಟೇಬಲ್, ಅಂಚೆ ಮತ ಎಣಿಕೆಗೆ 4 ಟೇಬಲ್ ಹೀಗೆ ಒಟ್ಟು ಒಂದು ಕ್ಷೇತ್ರದ ಮತ ಎಣಿಕೆಗೆ 18 ಟೇಬಲ್ ಅಳವಡಿಕೆ ಮಾಡಲಾಗಿದೆ. ಇನ್ನು ಮತ ಎಣಿಕೆಗೆ ಒಟ್ಟು 408 ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿ ಟೇಬಲ್ ಗು ಒಂದೊಂದು ಸಿಸಿಟಿವಿ ಅಳವಡಿಕೆ, ಒಟ್ಟು 144 ಟೇಬಲ್ಗಳಿಗೆ 144 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿದ್ದಾರೆ. ಅಲ್ಲದೇ, ಜಿಲ್ಲಾದ್ಯಂತ 71.01% ರಷ್ಟು ಮತದಾನ ಆಗಿದೆ. ಇದರಲ್ಲಿ 18,92,852 ಮತದಾರರಲ್ಲಿ 13,44,136 ಮತದಾರರು ಮತದಾನ ಮಾಡಿದ್ದಾರೆ. ನಾಳೆ ಎಂಟು ಮತಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ.