K1N ಡೆಸ್ಕ್: ಡ್ರ್ಯಾಗನ್ ಖ್ಯಾತಿಯ ಚೀನಾದಲ್ಲಿ ಕೋವಿಡ್ ವೈರಸ್ ತಾಂಡವಾಡುತ್ತಿದೆ. ಚೀನಾದಲ್ಲಿ ಕೋವಿಡ್ ಸೋಂಕಿನ ಅಬ್ಬರ ವಿಕೋಪಕ್ಕೆ ಏರಿದೆ. ಇನ್ನು ಒಂದೇ ದಿನದಲ್ಲಿ 3.7 ಕೋಟಿ ಕೋವಿಡ್ ಕೇಸ್ಗಳು ದೃಢವಾಗಿವೆ. ಅಲ್ಲದೇ, 20 ದಿನದಲ್ಲಿ 25 ಕೋಟಿ ಸೋಂಕು ಕಂಡುಬಂದಿದೆ. ಚೀನಾದಲ್ಲಿ ಒಮಿಕ್ರಾನ್ನ ಉಪತಳಿ (ಶೇ.18ರಷ್ಟು) 24.8 ಕೋಟಿ ಜನರಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಚೀನಾದಲ್ಲಿ ಜನತೆ ಕೊರೋನಾ ವೈರಸ್ನಿಂದ ನರಳಾಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.