ವಿಜಯಪುರ: ಲಕ್ಷಾಂತರ ಮೌಲ್ಯದ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ತಾಲ್ಲೂಕಿನ ಮಹಾಲ್ ಐನಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ನಡೆದಿದೆ.
ಹೊನ್ನಳ್ಳಿ ಗ್ರಾಮದ ವಿಷ್ಣು ಶಿವಣ್ಣ ನಂದ್ಯಾಳ ಬಂಧಿತ ಆರೋಪಿ. ಇನ್ನು 2.50 ಲಕ್ಷ ಮೌಲ್ಯದ ವಿವಿಧ ಕಂಪನಿಯ 6 ಬೈಕ್ಗಳನ್ನು ಪೊಲೀಸರು ಜಪ್ತಿಗೈದಿದ್ದಾರೆ. ಸಿಪಿಐ ಸಂಗಮೇಶ ಪಾಲಭಾವಿ ನೇತೃತ್ವದ ತಂಡದವರು ಆರೋಪಿ ವಿಷ್ಣುನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.