ವಿಜಯಪುರ: ಚಿನ್ನಕ್ಕಾಗಿ ವೃದ್ಧ ಕಿವಿ ಕತ್ತರಿಸಿ ಬಳಿಕ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರಾಂಪೂರ ಪಿಎ ಗ್ರಾಮದಲ್ಲಿ ನಡೆದಿದೆ.
ಮಡಿವಾಳಪ್ಪ ಭೀಮರಾಯ್ ಪೂಜಾರಿ ಹತ್ಯೆಯಾಗಿರುವದು ದುರ್ದೈವಿ. ಇನ್ನು ಮಡಿವಾಳಪ್ಪನ್ನು ಹತ್ಯೆಗೈದು ನಂತರ ಆತ್ಮಹತ್ಯೆಯಂತೆ ಬಿಂಬಿಸುವ ಕೆಲಸವನ್ನು ದುಷ್ಕರ್ಮಿಗಳು ಮಾಡಿದ್ದಾರೆ. ಅಲ್ಲದೇ, ಬಲಗಡೆಯ ಕಿವಿ ಕತ್ತರಿಸಿ ಚಿನ್ನ ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.