ವಿಜಯಪುರ ::
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ವಿರೋಧಿಸಿ ಮತ್ತು ಕೇಂದ್ರ ಸರ್ಕಾರದ ವೈಪಲ್ಯ ವನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರಧಾನ ಮಂತ್ರಿಗೆ ಮನವಿ :
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ವಿರೋಧಿಸಿ ಮತ್ತು ಕೇಂದ್ರ ಸರ್ಕಾರದ ವೈಪಲ್ಯ ವನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ವತಿಯಿಂದ ಪ್ರಧಾನ ಮಂತ್ರಿ ಯವರಿಗೆ ಮನವಿ ಮಾಡಲಾಯಿತು.
ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರಾದ ಅಕ್ಷಯ್ ಕುಮಾರ್ ಅಜಮನಿ ಯವರು ಮಾತನಾಡಿ ಭಾರತ ದೇಶ ಸಾವಿರಾರು ವರ್ಷಕ ಇತಿಹಾಸ ಇರುವಂಥಹ ದೇಶ ಈ ಬೇರೆ ದೇಶಗಳಿಗೆ ಮಾದರಿ ಯಾಗಿರತಕ್ಕಂತದ್ದು ಪ್ರವಾಸಿಕರು ಈ ದೇಶದ ಸೌಂದರ್ಯವನ್ನು ಸವಿಯಲು ಖುಷಿಯಿಂದ ಬರುತ್ತಾರೆ .
ಈ ದೇಶದ ಕಿರೀಟ ವೆಂದು ಪ್ರಖ್ಯಾತಿ ಹೊಂದಿದ ಐತಿಹಾಸಿಕ ಪ್ರವಾಸಿಗ ತಾಣವಾಗಿರುವ ಜಮ್ಮು ಕಾಶ್ಮೀರಕ್ಕೆ ಪ್ರಪಂಚದ ಮೂಲೆ ಮೂಲೆಗಳಿಂದ ಆಗಮಿಸುತ್ತಾರೆ ಹೆಸರುವಾಸಿಯಾಗಿರುವ ಜಮ್ಮು ಕಾಶ್ಮೀರ ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಸುಮಾರು 25ಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಹಾಡ ಹಗಲೇ ರೋಷಾ ರೋಷವಾಗಿ ಭಯವಿಲ್ಲದೆ ಅಂಜಿಕೆ ಇಲ್ಲದೆ ಉಗ್ರರು ಗುಂಡು ಹಾರೈಸುತ್ತಾರೆ ಅಂದರೆ ಅದು ಹೇಗೆ ಸಾಧ್ಯವಾಯಿತು,
ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ, ಗ್ರಹ ಇಲಾಖೆ, ಗುಪ್ತ ಚರ ಇಲಾಖೆ ಯಾರ್ಕ ನಿರ್ವಹಿಸುತ್ತಿರುವುದು ಅನುಮಾನಕ್ಕೆ ಸಾಕ್ಷಿಯಾಗಿದೆ.
ಇದರಿಂದ ಕಂಗಾಲಾದ ದೇಶದ ಜನರು ಭಯದ ವಾತಾವರಣ ದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಜನರ ಹಿತಾಸಕ್ತಿಯನ್ನು ಕಾಪಾಡಬೇಕಾದ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಇವತ್ತು ಅವರ ವೈಫಲ್ಯ ಎದ್ದು ಕಾಣುತ್ತಿದೆ.
ಇದರ ಹಿಂದೆಯೂ ಪುಲ್ವಾಮದಲ್ಲಿ 42 ಯೋದ್ದರ ಮೇಲೆ ಬಾಂಬ್ ದಾಳಿ ನಡೆಯಿತು, ಅವರಿಗೂ ನ್ಯಾಯ ಕೊಡಿಸುವ ಕೆಲಸ ಈ ಸರ್ಕಾರದಿಂದ ಸಾಧ್ಯವಾಗಿಲ್ಲ.
ಆದ್ದರಿಂದ ಉಗ್ರರ ದಾಳಿಯಿಂದ ಮೃತ ಪಟ್ಟ ಜನರಿಗೆ ರಕ್ಷಣೆ ನೀಡಬೇಕು ಅದೇ ರೀತಿಯಾಗಿ ಭಯಭೀತರಾದ ದೇಶದ ಜನರಿಗೂ ಕೂಡ ಕಾನೂನು ಸುವ್ಯವಸ್ಥೆಯಿಂದ ಭದ್ರತೆ ನೀಡಬೇಕು.
ಈ ಅನಾಹುತದ ವೈಫಲ್ಯಕ್ಕೆ ಕಾರಣವಾದ ಪ್ರಧಾನ ಮಂತ್ರಿ, ರಕ್ಷಣಾ ಸಚಿವರು ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾದೇಶ್ ಚಲವಾದಿ, ಶಂಕರ್ ಬಸರಗಿ, ಪಂಡಿತ್ ಯಲಗೋಡ, ಯುವರಾಜ್ ಓಲೇಕಾರ್, ಪ್ರಶಾಂತ್ ದಾಂಡೇಕರ್, ನವೀನ್, ಸಂದೇಶ್, ದಾವುದ, ಅಪ್ಪಷ್, ಭಾಗಿಯಾಗಿದ್ದರು.