ವಿಜಯಪುರ: ಜಿಲ್ಲಾ ಮಾಧ್ಯಮ ಬಳಗ ಹಾಗೂ ಜಿಲ್ಲಾ ಪೊಲೀಸ ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯ ವಿಜಯಪುರ ನಗರದ ಪರೇಡ್ ಮೈದಾನದಲ್ಲಿ ನಡೆಯಿತು. ಪಂದ್ಯದಲ್ಲಿ ಪೊಲೀಸ ಇಲಾಖೆಯ ಟೀಂ ಭರ್ಜರಿ ಗೆಲುವು ಸಾಧಿಸಿದೆ. ಮಾಧ್ಯಮ ಬಳಗ ಟಾಸ್ ಗೆದ್ದು ಪೊಲೀಸ ಇಲಾಖೆಯ ಟೀಂಗೆ ಮೊದಲು ಬ್ಯಾಟಿಂಗ್ ನೀಡಿತ್ತು. 12 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು ಭರ್ಜರಿ 139 ರನ್ ಕಲೆಹಾಕಿತ್ತು. ಇದನ್ನು ಬೆನ್ನಟ್ಟಿದ ಮಾಧ್ಯಮ ತಂಡ ಕೇವಲ 6 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿ ಸೋಲು ಕಂಡಿತ್ತು. ಅಲ್ಲದೇ, ಪೊಲೀಸ ತಂಡದಲ್ಲಿ ಸೋಮೇಶ್ ಗೆಜ್ಜಿ ಭರ್ಜರಿ ಅರ್ಧ ಶತಕ ಗಳಿಸಿದರು. ಇನ್ನು ಮಾಧ್ಯಮದ ತಂಡದಲ್ಲಿ ಪವರ್ ಟಿವಿ ಸುನೀಲ, ಪಸ್ಟ್ ನ್ಯೂಸ್ ರಾಚಪ್ಪ, ಈರಣ್ಣ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಬಾಲಿಂಗ್ನಲ್ಲಿ ಪಬ್ಲಿಕ್ ಟಿವಿ ಸುನೀಲ ಸೇರಿದಂತೆ ಉಳಿದವರು ಉತ್ತಮ ಬಾಲಿಂಗ್ ಮಾಡಿದ್ದಾರೆ. ತದನಂತರ ಕ್ರಿಕೆಟ್ ಮ್ಯಾಚ್ ಬಳಿಕ ಎರಡು ಟೀಂ ಸದಸ್ಯರು ಹಾಗೂ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.