ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಉಪಮೇಯರ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುವಾಗ ಯಡವಟ್ಟು ಮಾಡಿದ್ದಾರೆ. ಬೆಂಗಳೂರಿನಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್, ಸಚಿವರಾದ ಭೈರತಿ ಸುರೇಶ್, ಜಮೀರ್ ಅಹ್ಮದ್ ಖಾನ್ ಭೇಟಿ ಬಗ್ಗೆ
ಮೇಯರ್ ಆಗಿ ಮೆಹಜಬೀನ್ ಹೊರ್ತಿ ಎನ್ನುವ ಬದಲು ಮೆಹಜಬೀನ್ ಹೊರ್ತಿ ಪತಿ ಅಬ್ದುಲ್ ರಜಾಕ್ ಹೊರ್ತಿ ಅವರನ್ನು ಮೇಯರ್ ಎಂದು ಉಪಮೇಯರ್ ದಿನೇಶ್ ಹಳ್ಳಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ
ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಪತಿಯೋ..? ಪತ್ನಿಯೋ..? ಎಂದು ಚರ್ಚೆಗೆ ಗ್ರಾಸವಾಗಿದೆ.
ವಿಜಯಪುರ ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ಬಿಡುಗಡೆಗಾಗಿ ಸಚಿವರನ್ನು ಭೇಟಿ ಮಾಡಲು ಕಾಂಗ್ರೆಸ್ ಪಾಲಿಕೆ ಸದಸ್ಯರು ಹೋಗಿದ್ದರು.