ವಿಜಯಪುರ: ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಸನಗೌಡ ಮಾಡಗಿ ಪಕ್ಷಕ್ಕೆ ಸಕ್ರಿಯ ಕಾರ್ಯ ಮಾಡುತ್ತಿಲ್ಲ. ಅವರನ್ನು ಬದಲಿಸಬೇಕು ಎಂದು ಜೆಡಿಎಸ್ ಅಲ್ಪ ಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷ ಯಾಕುಬ್ ಕೂಪರ್ ಆಗ್ರಹಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಒಟ್ಟು ವಿಧಾನಸಭಾ ಕ್ಷೇತ್ರಗಳು 224 ರ ಪೈಕಿ 93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಮೊದಲ ಹಂತ ಪಟ್ಟಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳು 5 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ತೃಪ್ತಿಪಡುವಂತಾಗಿದೆ.
ಆದರೆ ಈ 93 ಅಭ್ಯರ್ಥಿಗಳಲ್ಲಿ ವಿಜಯಪುರ ಜಿಲ್ಲೆಗೆ ಮುಸ್ಲಿಂ ಅಭ್ಯಥಿಯನ್ನು ನೀಡದೇ ಇರುವುದು ಅಸಮಾಧಾನವಾಗಿದೆ ಎಂದರು. ಜಿಲ್ಲೆಯ ಪ್ರತಿಯೊಂದು ಮತಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು 30-40 ಸಾವಿರ ಮತದಾರರು ಒಳಗೊಂಡಿದ್ದು, ನಗರದಲ್ಲಿ ಶೇ. 50 ಅಲ್ಪಂ ಸಂಖ್ಯಾತರ ಮತಗಳಿವೆ. ಆದರೂ ಮುಸ್ಲಿಂ ಸಮುದಾಯಕ್ಕೆ ಟಿಕೇಟ ನೀಡದೆ ತಾರತಮ್ಯ ನಡೆದಿದೆ ಎಂದು ದೂರಿದರು.