ವಿಜಯಪುರ: ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಹಿಳಾ ವಕೀಲೆಯನ್ನು ನಿಯಮ ಉಲ್ಲಂಘಿಸಿ ಕೋರ್ಟ್ಗೆ ಹಾಜರುಪಡಿಸಿದ ಪೇದೆಯ ಅಮಾನತ್ತಿಗೆ ಆಗ್ರಹಿಸಿ ವಕೀಲರ ಸಂಘದವರು ಟೈರ್ಗೆ ಬೆಂಕಿ ಹಂಚಿ ಪ್ರತಿಭಟನೆ ನಡೆಸಿರುವ ಘಟನೆ ವಿಜಯಪುರ ನಗರದ ಕೋರ್ಟ್ ಸರ್ಕಲ್ ಬಳಿ ನಡೆದಿದೆ.
ಪೇದೆ ಎ ಎಸ್ ರಂಗಪ್ಪಗೊಳ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿದರು. ಅಲ್ಲದೇ, ವಕೀಲೆ ಅರುಣಾ ಪಾಟೀಲನ್ನು ಕೋರ್ಟ್ ಹಾಜರುಪಡಿಸಿದ್ದು ಖಂಡಿಸಿ ವಕೀಲಯರು ರಸ್ತೆ ತಡೆದು ಪ್ರತಿಭಟಿಸಿದರು. ಈ ವೇಳೆಯಲ್ಲಿ ಪೇದೆ ರಂಗಪ್ಪಗೊಳನ್ನು ಅಮಾನತು ಮಾಡುವಂತೆ ವಕೀಲರು ಪಟ್ಟು ಹಿಡಿದರು. ಈ ವೇಳೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಓರ್ವನ ಮೇಲೆ ಕೆಲವರು ಹಲ್ಲೆಗೈದ ಘಟನೆ ಕೂಡ ನಡೆಯಿತು.
ಇನ್ನು ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ರಾಮ ಅರಸಿದ್ಧಿ ಭೇಟಿ ನೀಡಿದರು. ಇನ್ನು ಪೇದೆ ರಂಗಪ್ಪಗೊಳನ್ನು ಕರ್ತವ್ಯ ನಿರ್ಲಕ್ಷ್ಯ ಹಿನ್ನಲೆ ಎಸ್ಪಿ ಆನಂದಕುಮಾರ ಅಮಾನತು ಮಾಡಿ ಆದೇಶ ಹೊರಡಿಸಿದರು.