ವಿಜಯಪುರ: ನಕಲಿ ಇನ್ಸ್ಟಾಗ್ರಾಮ್ ಸೃಷ್ಟಿಸಿ ಯುವತಿಗೆ ಚುಡಾಯಿಸುತ್ತಿದ್ದ ಯುವಕನ್ನು ವಿಜಯಪುರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಪುಣೆ ನಗರದ ನಿವಾಸಿ ಗಣೇಶ ನಾಗೇಶ ವಾಗ್ಮೋರೆ ಬಂಧಿತ ಆರೋಪಿ. ಇನ್ನು ನಕಲಿ ಇನ್ಸ್ಟಾಗ್ರಾಮ್ನಲ್ಲಿ ವಿಜಯಪುರದ ಯುವತಿಗೆ ಒತ್ತಾಯಪೂರ್ವಕ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ ಅಲ್ಲದೇ, ಅವಳು ಪ್ರೀತಿಸಲು ನಿರಾಕರಿಸಿದ್ದರಿಂದ ಅವಳ ವೈಯಕ್ತಿಕ ಫೋಟೊಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹರಿಬಿಟ್ಟು ಯುವತಿಯ ವೈಯಕ್ತಿಕ ಜೀವನಕ್ಕೆ ಧಕ್ಕೆ ಮಾಡಿದ್ದನು. ಅದಕ್ಕಾಗಿ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ದಾಳಿಗೈದು ಕೃತ್ಯಕ್ಕೆ ಬಳಸಿದ ಮೊಬೈಲ್ ಸೀಮ್ ಕಾರ್ಡ್ ಜಪ್ತಿಗೈದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿಜಯಪುರ ಸೈಬರ್ ಕ್ರೈಂ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.