ವಿಜಯಪುರ: ಕೈಗಾರಿಕೆ ತರಬೇತಿ ಹಾಗೂ ಉದ್ಯೋಗ ಇಲಾಖೆ ವತಿಯಿಂದ ಬಿ.ಎಲ್.ಡಿ.ಇಯ ಐಟಿಐ/ ಎಸ್.ಎಸ್. ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇದೇ ಜೂ.12ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಐಟಿಐ ಅಭ್ಯರ್ಥಿಗಳಿಗೆ ಜಿಲ್ಲಾ ಶಿಶುಕ್ಷು ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಶಿಶುಕ್ಷು ಮೇಳದಲ್ಲಿ ಅನೇಕ ಪ್ರತಿಷ್ಟಿತ ಉದ್ದಿಮೆಗಳು ಭಾಗವಹಿಸುತ್ತಿದ್ದು, ಸದರಿ ಮೇಳದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆಯೂ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ – 9480399590 ಹಾಗೂ 7353129763 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಶಿಶುಕ್ಷು ಮೇಳ ನೋಡಲ್ ಅಧಿಕಾರಿ ಜೆ. ಬಿ. ದನಗೊಂಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.