ವಿಜಯಪುರ: ಎಚ್ಡಿ ಕುಮಾರಸ್ವಾಮಿ ಮತ್ತೇ ಸಿಎಂ ಆಗ್ತಾರೆ ಎಂದು ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ ಹೇಳಿದರು.
2023ರಲ್ಲಿ ಸಮ್ಮಿಶ್ರ ಸರ್ಕಾರ ಬರುತ್ತದೆ. ಅದಕ್ಕಾಗಿ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಎಚ್ಡಿ ಕುಮಾರಸ್ವಾಮಿ ಸಿಎಂ ಆಗೋದು ಪಕ್ಕಾ ಎಂದರು. ಇನ್ನು ನನ್ನ ಸಮೀಕ್ಷೆಯಲ್ಲಿ ಸಮ್ಮಿಶ್ರ ಸರ್ಕಾರ ಆಗುತ್ತದೆ. ಯಾರು ಏನೇ ಹೇಳಿದ್ರು ಎಚ್ಡಿಕೆ ಸಿಎಂ ಆಗ್ತಾರೆ. ಯಾರ ಜೊತೆಗೆ ಸಮ್ಮಿಶ್ರ ಆಗುತ್ತದೆ ಎನ್ನುವುದು ಮುಹೂರ್ತ ಕೂಡಿ ಬಂದಿಲ್ಲ. ಆದ್ರೇ, ಕವಡೆ ಹಾಕಿ ಹೇಳಬೇಕು ಆಗ್ತೆ ಎಂದರು. ಇನ್ನು ಎರಡು ಪಕ್ಷದಿಂದ ನನಗೆ ಬುಲಾವ್ ಬಂದಿದ್ದು, ಆದ್ರೇ, ನನಗೆ ಕ್ಷೇತ್ರದ ಜನತೆ ಆಶೀರ್ವಾದ ಬೇಕು. ಅವರ ತೀರ್ಮಾನವೇ ಅಂತಿಮ ತೀರ್ಮಾನ ಎಂದರು.