ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ಹಿನ್ನಲೆ 92 ಆಕ್ಷೇಪಣೆ ಸಲ್ಲಿಸಲಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಪರಿಶೀಲಿಸಿ ಅಂತಿಮ ಮೀಸಲಾತಿ ಪ್ರಕಟಿಸಲಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಸೇರಿ ಶೇ.50 ರಷ್ಟು ಮೀಸಲಾತಿ ಇರಬೇಕು. 35 ವಾರ್ಡ್ ಇರುವುದರಿಂದ 17 ವಾರ್ಡ್ ಮೀಸಲಾಗಿದ್ದು, 18 ಮೀಸಲೇತರ ವಾರ್ಡ್ ಎಂದು ಘೋಷಿಸಲಾಗಿದೆ. ಇದರಲ್ಲಿ 5 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡ, ಉಳಿದ 11 ಹಿಂದುಳಿದ ವರ್ಗ ಎಂದು ನಿಗದಿಯಾಗಿದೆ. ಇದರಲ್ಲಿ 9 ವರ್ಗ ಅ ಮತ್ತು ಎರಡು ಬ ಎಂದಾಗಿದೆ.
ಮೀಸಲಾತಿ ಬದಲಾವಣೆಗೆ ಸಾಕಷ್ಟು ಆಕ್ಷೇಪಣೆ ಸಲ್ಲಿಸಿದ್ದಾರೆ. ನಿಯಮಾನುಸಾರ ಪರಿಶೀಲಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.