ವಿಜಯಪುರ: ಎರಡು ಎಟಿಎಂಗಳಲ್ಲಿ ಕಳ್ಳರು ಕೈಚಳಕ ತೋರಿಸಿರುವ ಘಟನೆ ವಿಜಯಪುರ ನಗರದ ಖಾಜಾ ಅಮೀನ್ ದರ್ಗಾ ಬಳಿ ಗುರುವಾರ ನಡೆದಿದೆ.
ಎಸ್ಬಿಐ, ಐಸಿಐಸಿಐ ಬ್ಯಾಂಕ್ ಎಟಿಎಂಗಳಲ್ಲಿ ಕಳ್ಳರು ಎಟಿಎಂಗಳನ್ನು ಒಡೆದು ಹಣ ಕಳ್ಳತನಕ್ಕೆ ಯತ್ನಿಸಿದ್ದಾರೆ. ಅಲ್ಲದೇ, ಎರಡು ಎಟಿಎಂಗಳು ಅಕ್ಕಪಕ್ಕದಿವೆ. ಆದ್ರೇ, ಎಟಿಎಂನಲ್ಲಿ ಎಷ್ಟು ಹಣ ಕಳ್ಳತನ ಆಗಿದೆ ಎನ್ನುವುದು ಪೊಲೀಸ ತನಿಖೆ ಬಳಿಕ ತಿಳಿದು ಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು, ಆದರ್ಶನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.