ವಿಜಯಪುರ: ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾತ್ರಾಳ ಕೆನಾಲ್ನಲ್ಲಿ ನಡೆದಿದೆ. 40 ವರ್ಷದ ಪ್ರಕಾಶ ಭೀಮಪ್ಪ ಸದಾಪಗೊಳನ ಶವ ಪತ್ತೆಯಾಗಿದೆ. ಇನ್ನೂ ಇದು ಕೊಲೆಯೋ ಅಥವಾ ಸಹಜ ಸಾವು ಎಂಬುದು ಪೊಲೀಸ ತನಿಖೆ ಬಳಿಕ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.