ವಿಜಯಪುರ: ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರಿಂದ ಹಿನ್ನೆಲೆ ಪ್ರೇಮಿಗಳು ಮನನೊಂದು ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಜೈನಾಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ರಾಕೇಶ್ ಅಂಬಲಿ (23) ಹಾಗೂ ಸಾವಿತ್ರಿ ಅಂಬಲಿ (19) ಮೃತಪಟ್ಟಿರುವ ಪ್ರೇಮಿಗಳು.
*ಪ್ರೇಮ ಆರಂಭ..*
ರಾಕೇಶ ಹಾಗೂ ಸಾವಿತ್ರಿ ಜೈನಾಪುರ ಗ್ರಾಮದವರು. ಇಬ್ಬರ ಮನೆ ಅಕ್ಕಪಕ್ಕದಲ್ಲಿತ್ತು. ಇಬ್ಬರಲ್ಲೂ ಪ್ರೇಮ ಆರಂಭವಾಗಿ ಕಳೆದ ನಾಲ್ಕೇದು ವರ್ಷಗಳಿಂದ ಒಬ್ವರಿಗೊಬ್ಬರು ಪ್ರೀತಿಸುತ್ತಿದ್ದರು. ಆದ್ರೇ, ಎರಡು ಮನೆಯವರ ಲವ್ಗೆ ವಿರೋಧವಿತ್ತು. ಅದಕ್ಕಾಗಿ
ಸಾಯುವ ಮುನ್ನವೇ ರಾಕೇಶ ಹಾಗೂ ಸಾವಿತ್ರಿ ತಮ್ಮ ಆಸೆಯಂತೆ ಮದುವೆಯಾಗಿ ನಂತರ ನೇಣಿಗೆ ಶರಣಾಗಿದ್ದಾರೆ. ನೇಣು ಬಿಗಿದುಕೊಂಡು ಸಾವನ್ನಪ್ಪಿದ ಮೇಲೆ ಗ್ರಾಮಕ್ಕೆ ಈ ವಿಷಯ ಗೊತ್ತಾಗಿದೆ. ಶವಗಳನ್ನು ನೇಣಿನಿಂದ ಕೆಳಗೆ ಇಳಿಸಿದ ಮೇಲೆ ಸಾವಿತ್ರಿ ಕೊರಳಲ್ಲಿ ತಾಳಿ ಇರುವದು ಗೊತ್ತಾಗಿದೆ. ಹೀಗಾಗಿ ತಮ್ಮ ಆಸೆಯಂತೆ ಮದುವೆಯಾಗಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರೊಬ್ಬರು ಮಾಹಿತಿ ನೀಡಿದ್ದಾರೆ. ಬಸವನಬಾಗೇವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.